ಕಾರ್ಮಿಕರ ರಾಜ್ಯ ವಿಮಾ ನಿಗಮದ (ಇ.ಎಸ್.ಐ. ನಿಗಮ) 75ನೇ ಸಂಸ್ಥಾಪನಾ ದಿನಾಚರಣೆ

0
2

ಸಂಸ್ಥಾಪನಾ ದಿನದ ಅಂಗವಾಗಿ ನೇತಾಜಿ ಸುಭಾಷ್ ಎಸ್. ಎ. ಐ. ತರಬೇತಿ ಕೇಂದ್ರದಲ್ಲಿ ಸೈಕಲ್ ರ್ಯಾಲಿ ಆಯೋಜನೆ  

ಕಾರ್ಮಿಕರ ರಾಜ್ಯ ವಿಮಾ ನಿಗಮದ (ಇ.ಎಸ್.ಐ. ನಿಗಮ) 75ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಬೆಂಗಳೂರಿನ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಸಹಯೋಗದೊಂದಿಗೆ 22ನೇ ಫೆಬ್ರವರಿ 2026 ರಂದು ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ದಕ್ಷಿಣ ವಲಯದ, ನೇತಾಜಿ ಸುಭಾಷ್ ಎಸ್. ಎ. ಐ. ತರಬೇತಿ ಕೇಂದ್ರದಲ್ಲಿ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಮನೋಜ್ ಕುಮಾರ್ ಅವರ ನೇತೃತ್ವದಲ್ಲಿ ಸೈಕಲ್ ರ‍್ಯಾಲಿಯನ್ನು  ಹಮ್ಮಿಕೊಳ್ಳಲಾಗಿತ್ತು. 

ಸೈಕಲ್ ರ‍್ಯಾಲಿಯನ್ನು ಪ್ರಾದೇಶಿಕ ನಿರ್ದೇಶಕರಾದ ಶ್ರೀ ಮನೋಜ್ ಕುಮಾರ್ ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರದ ಉಪ ನಿರ್ದೇಶಕರಾದ ಶ್ರೀ ಹರೀಶ್ ಬಾಬು ಅವರು ಜಂಟಿಯಾಗಿ ಧ್ವಜಾರೋಹಣದ ಮೂಲಕ ಉದ್ಘಾಟಸಿದರು. 

 ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಮನೋಜ್ ಕುಮಾರ್ ರವರು  ದೇಹ  ಸಧೃಡತೆಯನ್ನು(ಫಿಟ್ನೆಸ್)  ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡುವ ಉದ್ದೇಶದಿಂದ ಪ್ರಧಾನಮಂತ್ರಿ ಅವರು ಫಿಟ್ ಇಂಡಿಯಾ ಚಳವಳಿಯನ್ನು ಪ್ರಾರಂಭಿಸಿದ್ದಾರೆ. ಸದೃಢ ಮತ್ತು ಪ್ರಗತಿಪರ ಭಾರತದ ದಿಕ್ಕಿನಲ್ಲಿ ಫಿಟ್ ಇಂಡಿಯಾ ಚಳುವಳಿ ಒಂದು ಹೆಜ್ಜೆಯಾಗಿದೆ ಮತ್ತು ಇದೇ ಉದ್ದೇಶದಿಂದ ಕಾರ್ಮಿಕರ ರಾಜ್ಯ ವಿಮಾ ನಿಗಮದ 75ನೇ ಸಂಸ್ಥಾಪನಾ ದಿನವನ್ನು ಸೈಕಲ್ ರ‍್ಯಾಲಿ ಯೊಂದಿಗೆ ಉದ್ಘಾಟಿಸಲಾಯಿತು ಎಂದು ಹೇಳಿದರು. 

ಉಪ ನಿರ್ದೇಶಕರಾದ  ಶ್ರೀ ಹರೀಶ್ ಬಾಬು ಅವರು ಮಾತನಾಡಿ  ಫಿಟ್ ಇಂಡಿಯಾ ಎಂಬುದು ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಅಭಿಯಾನವಾಗಿದ್ದು, ಜನರ ಆರೋಗ್ಯ ಪ್ರಜ್ಞೆಯನ್ನು ಹೆಚ್ಚಿಸುವ ಏಕೈಕ ಉದ್ದೇಶ ಹೊಂದಿದೆ ಎಂದು ಹೇಳಿದರು.

ಈ ರ‍್ಯಾಲಿಯಲ್ಲಿ ಕಾ.ರಾ.ವಿ ನಿಗಮದ ಜಂಟಿ ನಿರ್ದೇಶಕರಾದ ಶ್ರೀ ಅರಸದ ಕಿಶೋರ್ , ಭಾರತೀಯ ಕ್ರೀಡಾ ಪ್ರಾಧಿಕಾರ, ಪೀಣ್ಯದ ಉಪ ನಿರ್ದೇಶಕರಾದ  ಹರೀಶ್ ಬಾಬು ಮತ್ತು ಕಾ.ರಾ.ವಿ ನಿಗಮದ ಸಹಾಯಕ ನಿರ್ದೇಶಕರಾದ ಶ್ರೀ ನಾಗೇಂದ್ರ ಕುಮಾರ್ ಹಾಗೂ ನಿಗಮದ ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರದ ಇತರೆ ಅಧಿಕಾರಿಗಳು ಭಾಗವಹಿಸಿದ್

Source : PIB